ಅಭಿಪ್ರಾಯ / ಸಲಹೆಗಳು

ನಿರ್ದೇಶಕರ ಮಂಡಳಿ

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರ ಬಗ್ಗೆ

ನಿರ್ದೇಶಕ ಮಂಡಳಿ:

 

ಶ್ರೀ. ಹಳೇಬೀಡು ಶ್ಯಾಮಣ್ಣ ಸಚ್ಚಿದಾನಂದ ಮೂರ್ತಿ, ಅಧ್ಯಕ್ಷರು.

ಶ್ರೀ. ಹೆಚ್. ಎಸ್. ಸಚ್ಚಿದಾನಂದ ಮೂರ್ತಿಯವರು ಮಂಡಳಿಯ ಅಧ್ಯಕ್ಷರಾಗಿದ್ದು, ಈ ಹಿಂದೆ ಕಿಯೋನಿಕ್ಸ್ ನ ಅಧ್ಯಕ್ಷರಾಗಿಯೂ ದುಡಿದ ಅನುಭವವುಳ್ಳವರಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಾಗೂ ಭಾರತೀಯ ಜನತಾ ಪಕ್ಷದಲ್ಲಿ ಕಾರ್ಯಕರ್ತರಾಗಿ ಆರಂಭಿಸಿ 38 ವರ್ಷಗಳಿಂದ ಸಮಾಜಸೇವೆ ಮಾಡುತ್ತಿದ್ದು, ಭಾ.ಜ.ಪ. ದ ಜಿಲ್ಲಾ ಅಧ್ಯಕ್ಷರಾಗಿ ಸಹ ಕಾರ್ಯನಿರ್ವಹಿಸಿರುತ್ತಾರೆ. ದಿನಾಂಕ 6.1.2020 ರಂದು ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುತ್ತಾರೆ.

 

ಶ್ರೀ. ತುಷಾರ್‌ ಗಿರಿನಾಥ್, ಭಾ.ಆ.ಸೇ

ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳಾದ ಶ್ರೀ.ತುಷಾರ್‌ ಗಿರಿನಾಥ್, ಭಾ.ಆ.ಸೇ ಇವರು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾಗಿದ್ದು, ಮಂಡಳಿಯಲ್ಲಿ ಸರ್ಕಾರದಿಂದ ನಾಮನಿರ್ದೇಶಿತ ನಿರ್ದೇಶಕರಾಗಿದ್ದಾರೆ. 

 

ಶ್ರೀಮತಿ ರೋಹಿಣಿ ಸಿಂಧೂರಿ, ಭಾ.ಆ.ಸೇ

ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳಾದ ಶ್ರೀಮತಿ ರೋಹಿಣಿ ಸಿಂಧೂರಿ, ಭಾ.ಆ.ಸೇ ಇವರು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾಗಿದ್ದು ಮಂಡಳಿಯಲ್ಲಿ ಸರ್ಕಾರದಿಂದ ನಾಮನಿರ್ದೇಶಿತ ನಿರ್ದೇಶಕರಾಗಿದ್ದಾರೆ.

  

ಶ್ರೀಮತಿ. ಭಾನುಮತಿ ಕರುಣಾಕರನ್

ಶ್ರೀಮತಿ. ಭಾನುಮತಿ ಕರುಣಾಕರನ್ ಇವರು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಜಂಟಿ ಕಾರ್ಯದರ್ಶಿಗಳಾಗಿದ್ದು, ಮಂಡಳಿಯಲ್ಲಿ ಸರ್ಕಾರದಿಂದ ನಾಮನಿರ್ದೇಶಿತ ನಿರ್ದೇಶಕರಾಗಿದ್ದಾರೆ.

 

ಶ್ರೀಮತಿ. ಲಕ್ಷ್ಮೀ

ಶ್ರೀಮತಿ. ಲಕ್ಷ್ಮೀ, ಇವರು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಕೇಂದ್ರ ಸ್ಥಾನಿಕ ಸಹಾಯಕರಾಗಿದ್ದು, ಮಂಡಳಿಯಲ್ಲಿ ಸರ್ಕಾರದಿಂದ ನಾಮನಿರ್ದೇಶಿತ ನಿರ್ದೇಶಕರಾಗಿದ್ದಾರೆ.

 

ಶ್ರೀ. ಟಿ.ಕೆ. ಮಂಜುನಾಥ್, ವ್ಯವಸ್ಥಾಪಕ ನಿರ್ದೇಶಕರು

ಶ್ರೀ.ಟಿ.ಕೆ. ಮಂಜುನಾಥ್ , ಇವರು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಸರ್ಕಾರದಿಂದ ನಿಯೋಜನೆಗೊಂಡಿರುತ್ತಾರೆ.

  

ಶ್ರೀ. ಶಿವರಾಮ ಉಡುಪ

ಶ್ರೀ. ಶಿವರಾಮ ಉಡುಪ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಾಮನಿರ್ದೇಶಿತ ಮಂಡಳಿ ಸದಸ್ಯರಾಗಿದ್ದಾರೆ.

 

ಶ್ರೀ. ಕೆ. ರಾಜೇಶ್ ನಡ್ಯಂತಿಲ್ಲಾಯ

ಶ್ರೀ. ಕೆ. ರಾಜೇಶ್ ನಡ್ಯಂತಿಲ್ಲಾಯ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಾಮನಿರ್ದೇಶಿತ ಮಂಡಳಿ ಸದಸ್ಯರಾಗಿದ್ದಾರೆ.

 

ಶ್ರೀ. ಸಿ. ವಿ. ಗೋಪಿನಾಥ

ಶ್ರೀ. ಸಿ. ವಿ. ಗೋಪಿನಾಥ್ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಾಮನಿರ್ದೇಶಿತ ಮಂಡಳಿ ಸದಸ್ಯರಾಗಿದ್ದಾರೆ. ಈ ಹಿಂದೆ ಅವರು ಸೀನಿಯರ್ ಉಪ ಮಹಾನಿರ್ದೇಶಕರು ಮತ್ತು ಭಾರತ ಸರ್ಕಾರದ ಸಂವಹನ ಸಚಿವಾಲಯ, ನವದೆಹಲಿಯಲ್ಲಿ ಮಾಜಿ ಅಧಿಕಾರಿ  ಹೆಚ್ಚುವರಿ ಕಾರ್ಯದರ್ಶಿಗಳಾಗಿ ಹುದ್ದೆಯನ್ನು ಅಲಂಕರಿಸಿದ್ದಾರೆ.

 

ಶ್ರೀ. ಸುಬ್ರಾಯ ಎಂ. ಹೆಗಡೆ

ಶ್ರೀ. ಸುಬ್ರಾಯ ಎಂ. ಹೆಗಡೆ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಾಮನಿರ್ದೇಶಿತ ಮಂಡಳಿ ಸದಸ್ಯರಾಗಿದ್ದಾರೆ. ಅವರು ಉಪನ್ಯಾಸಕರಾಗಿ, ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಬೆಂಗಳೂರಿನ ಫಿಸ್ಕಲ್ ಪಾಲಿಸಿ ಇನ್ಸ್ಟಿಟ್ಯೂಟ್ ಅಲ್ಲಿ ಸಲಹೆಗಾರ ಮತ್ತು ಅಧ್ಯಾಪಕರಾಗಿದ್ದಾರೆ, ಐಐಎಂ ಬೆಂಗಳೂರು ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳು / ನಿರ್ವಹಣಾ ಸಂಸ್ಥೆಗಳಲ್ಲಿ ಜಿಎಸ್‌ಟಿ ಬಗ್ಗೆ ಅತಿಥಿ ಭಾಷಣಕಾರರಾಗಿದ್ದಾರೆ.

 

ಶ್ರೀ. ಕೆ. ಎನ್. ಛಾಯಾಪತಿ

ಶ್ರೀ. ಕೆ.ಎನ್. ಛಾಯಾಪತಿ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಾಮನಿರ್ದೇಶಿತ ಮಂಡಳಿ ಸದಸ್ಯರಾಗಿದ್ದಾರೆ. ಇವರು ಕರ್ನಾಟಕ ಬ್ರಾಹ್ಮಣ ಮಹಾಸಭಾ, ಕರ್ನಾಟಕ ಬಿ.ಜೆ.ಪಿ. ರಾಜ್ಯ ಕಾರ್ಯಕಾರಿಣಿಯ ಸದಸ್ಯರು, ಕರ್ನಾಟಕದ ಪ್ರತಿಷ್ಠಿತ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ನ ನಿರ್ದೇಶಕರು, ಶ್ರೀ ರಾಮ ಸೇವಾ ಮಂಡಳಿ, ಶಂಕರಪುರಂ ಬೆಂಗಳೂರು ಇದರ ಅಧ್ಯಕ್ಷರು ಮತ್ತು ಇನ್ನೂ ಹಲವಾರು ಪಾತ್ರ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವರು.

  

ಶ್ರೀ. ವಸಂತ ಗುರುನಾಥ ನಾಡಜೋಶಿ

ಶ್ರೀ. ವಸಂತ ಗುರುನಾಥ ನಾಡಜೋಶಿ, ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಾಮನಿರ್ದೇಶಿತ ಮಂಡಳಿ ಸದಸ್ಯರಾಗಿದ್ದಾರೆ. ಜಿಲ್ಲಾ ಅಧ್ಯಕ್ಷರು, ಬಿ.ಜೆ.ಪಿ ಮತ್ತು ಇತರ ಸಾಮಾಜಿಕ ಸಂಸ್ಥೆಗಳಲ್ಲಿ ಇನ್ನೂ ಹಲವಾರು ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವರು.

 

ಶ್ರೀ ಪಿ. ಸಿ. ಶ್ರೀನಿವಾಸ್

ಶ್ರೀ. ಪಿ.ಸಿ. ಶ್ರೀನಿವಾಸ್ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಾಮನಿರ್ದೇಶಿತ ಮಂಡಳಿ ಸದಸ್ಯರಾಗಿದ್ದಾರೆ. ಇವರು ಬಿ.ಜೆ.ಪಿ. ಯುವ ಮೊರ್ಚ, ದಾವಣಗೆರೆ, ಇದರ ಜಿಲ್ಲಾ ಅಧ್ಯಕ್ಷರು, ಬ್ರಾಹ್ಮಣ ಯುವ ವೇದಿಕೆ ಯ ಸದಸ್ಯರು, ಬಿ.ಜೆ.ಪಿ ಮತ್ತು ಇತರ ಸಾಮಾಜಿಕ ಸಂಸ್ಥೆಗಳಲ್ಲಿ ಇನ್ನೂ ಹಲವಾರು ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವರು.

 

ಶ್ರೀ. ಎಂ. ಆರ್. ಬಾಲಕೃಷ್ಣ

ಶ್ರೀ. ಎಂ. ಆರ್. ಬಾಲಕೃಷ್ಣ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಾಮನಿರ್ದೇಶಿತ ಮಂಡಳಿ ಸದಸ್ಯರಾಗಿದ್ದಾರೆ. ಇವರು ರಾಮಕೃಷ್ಣ ವಾಣಿಜ್ಯ ವಿದ್ಯಾಸಂಸ್ಥೆಯನ್ನು ಪ್ರಾರಂಭ ಮಾಡಿ, 45 ವರ್ಷಗಳ ಕಾಲ ಮುನ್ನಡೆಸಿಕೊಂಡು ವೃತ್ತಿ ನಡೆಸಿರುತ್ತಾರೆ. ಇವರು ವಿಶ್ವ ಹಿಂದೂ ಪರಿಷತ್, ಬಿ. ಜೆ. ಪಿ. ಹಾಗೂ ಬ್ರಾಹ್ಮಣ ಸಂಘಗಳಲ್ಲಿ ಹತ್ತಾರು ವರುಷಗಳ ಕಾಲಾ ಸೇವೆ ಸಲಿಸಿರುತ್ತಾರೆ.

 

ಶ್ರೀಮತಿ. ವತ್ಸಲ ನಾಗೇಶ್

ಶ್ರೀಮತಿ. ವತ್ಸಲ ನಾಗೇಶ್ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಾಮನಿರ್ದೇಶಿತ ಮಂಡಳಿ ಸದಸ್ಯರಾಗಿದ್ದಾರೆ. ಇವರು ಶ್ರೀ ಶುಕ್ಲ ಯಜುಶಾಕ ಟ್ರಸ್ಟ್, ಚಾಮರಾಜಪೇಟೆ, ಬೆಂಗಳೂರು ಇದರ ಅಧ್ಯಕ್ಷರು, ಅಖಿಲ ಭಾರತ ಕಣ್ವ ಪರಿಶತ್ತಿನ ಮಹಿಳಾ ವಿಭಾಗದ ರಾಜ್ಯ ಮಟ್ಟದ ಅಧ್ಯಕ್ಷರು ಹಾಗೂ ಇನ್ನಿತರ ಪಾತ್ರ- ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವರು.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಅನುಭವಿ ಹಾಗೂ ಹಿರಿಯರನ್ನು ನೇಮಿಸಿಕೊಳ್ಳುವ ಹಿತದೃಷ್ಟಿಯಿಂದ ಸರ್ಕಾರ ಆದೇಶ ಸಂಖ್ಯೆ:ಕಂಇ 128 ಮುಅಬಿ 2018 (ಭಾ-2) ದಿನಾಂಕ:22-07-2020 ರಂತೆ ಈ ಕೆಳಕಂಡವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

ಶ್ರೀ. ಹೆಚ್. ಸಿ. ಪುರುಷೋತ್ತಮ್

ಶ್ರೀ. ಹೆಚ್. ಸಿ. ಪುರುಷೋತ್ತಮ್ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರ ಮಂಡಳಿ ಸದಸ್ಯರಾಗಿದ್ದಾರೆ. ಇವರು ವೃತ್ತಿಯಲ್ಲಿ ಖಾಸಗಿ ಗುತ್ತಿಗೆದಾರರಾಗಿದ್ದು ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರದ ಪ್ರಮುಖ ಮುಖಂಡರು, ಭಾರತೀಯ ಜನತಾ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, 2002 ರಲ್ಲಿ ಬೆಂಗಳೂರು ನಗರದ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಬಿ. ಜೆ. ಪಿ. ಮತ್ತು ಇತರ ಸಾಮಾಜಿಕ ಸಂಸ್ಥೆಗಳಲ್ಲಿ ಇನ್ನೂ ಹಲವಾರು ಪಾತ್ರ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವರು.

 

ಶ್ರೀ. ಡಾ॥ ಬಿ. ಎಸ್. ರಾಘವೇಂದ್ರ ಭಟ್

ಶ್ರೀ. ಡಾ॥ ಬಿ. ಎಸ್. ರಾಘವೇಂದ್ರ ಭಟ್ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರ ಮಂಡಳಿ ಸದಸ್ಯರಾಗಿದ್ದಾರೆ. ಇವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ ಕಾರ್ಯದರ್ಶಿಗಳು, ಗಾಯತ್ರಿ ಸೇವಾ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಇನ್ನೂ ಹಲವಾರು ಸಂಘ ಸಂಸ್ಥೆಗಳಲ್ಲಿ ಉತ್ತಮ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವರು.

 

ಶ್ರೀ. ಡಿ. ವಿ. ರಾಜೇಂದ್ರ ಪ್ರಸಾದ್

ಶ್ರೀ. ಡಿ. ವಿ. ರಾಜೇಂದ್ರ ಪ್ರಸದ್ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರ ಮಂಡಳಿ ಸದಸ್ಯರಾಗಿದ್ದಾರೆ. ಇವರು ಖಾಸಗಿ ಕಂಪನಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ನಂತರ ರಿಯಲ್ ಎಸ್ಟೇಟ್ ಸೇರಿದಂತೆ ತಮ್ಮದೇ ಆದ ಸ್ವಂತ ಉದ್ಯೋಗ ಪ್ರಾರಂಭಿಸಿದರು. ಇವರು ಗೌರಿಬಿದನೂರು ತಾಲ್ಲೂಕು ವಿಧುರಾಶ್ವತ್ಥ ಬ್ರಾಹ್ಮಣ ಸಂಘದ ಅಧ್ಯಕ್ಷರು, ಶ್ರೀ ಶುಕ್ಲ ಯಜುಶಾಕ ಟ್ರಸ್ಟ್, ಚಾಮರಾಜಪೇಟೆ, ಬೆಂಗಳೂರು ಇದರ ಉಪಾಧ್ಯಕ್ಷರು; ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಬ್ರಾಹ್ಮಣ ಸಂಘಗಳ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ.

 

ಶ್ರೀ. ಪವನ್ ಕುಮಾರ್ ವಿ.

ಶ್ರೀ. ಪವನ್ ಕುಮಾರ್ ವಿ. ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರ ಮಂಡಳಿ ಸದಸ್ಯರಾಗಿದ್ದಾರೆ. ಇವರು ಶಾಸಕಾಂಗ ಕಾನೂನು ಮತ್ತು ಕಲೆಗಳಲ್ಲಿ ಡಬಲ್ ಪದವೀಧರರಾಗಿದ್ದಾರೆ. ಇವರು ರಾಜಕಾರಣಿಯಾಗಿದ್ದು, ಯಲಹಂಕದ ಬಿ.ಜೆ.ಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷರಾಗಿದ್ದರು ಮತ್ತು ಬೆಂಗಳೂರು ನಗರ ಜಿಲ್ಲೆಯ ಬಿ.ಜೆ.ಪಿ ಯುವ ಮೋರ್ಚಾದ ಕಾರ್ಯದರ್ಶಿಯಾಗಿದ್ದಾರೆ. ಇವರು ARIVU ಫೌಂಡೇಶನ್ ಎಂಬ ಎನ್ಜಿಒದ ಉಪಾಧ್ಯಕ್ಷರಾಗಿದ್ದಾರೆ.

 

ಶ್ರೀ. ಜಗದೀಶ್ ವಿಠಲರಾವ್ ಹುನಗುಂದ

ಶ್ರೀ. ಜಗದೀಶ್ ವಿಠಲರಾವ್ ಹುನಗುಂದ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರ ಮಂಡಳಿ ಸದಸ್ಯರಾಗಿದ್ದಾರೆ. ಇವರು ಔಷಧಿಯ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸಿದ್ದು ಅಖಿಲ ಭಾರತ ಭಾರತೀಯ ಬ್ರಾಹ್ಮಣ ಮಹಾಸಂಘ ದ ರಾಜ್ಯ ಕಾರ್ಯದರ್ಶಿಗಳು, ಆ.ಭಾ.ವಿ.ಪ. ಹಳೇಯ ಕಾರ್ಯಕರ್ತರ ರಾಜ್ಯ ಸಂಚಾಲಕರು ಆಗಿ ಇನ್ನೂ ಹಲವಾರು ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸಿರುವರು.

 

 

ಶ್ರೀ. ವಿನೀತ್ ಶ್ಯಾಮ್ ಭಟ್, ವಕೀಲರು

ಶ್ರೀ. ವಿನೀತ್ ಶ್ಯಾಮ್ ಭಟ್ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರ ಮಂಡಳಿ ಸದಸ್ಯರಾಗಿದ್ದಾರೆ. ಇವರು ಕಾನೂನಿನಲ್ಲಿ ಪದವಿಗಳನ್ನು ಹೊಂದಿದ್ದಾರೆ - (ಬಿ.ಎ., ಎಲ್.ಎಲ್.ಬಿ.) ಹಾಗೂ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ (LL.M.) ಬೆಂಗಳೂರು ವಿಶ್ವವಿದ್ಯಾಲಯದ ಯುನಿವರ್ಸಿಟಿ ಕಾನೂನು ಕಾಲೇಜಿನಿಂದ ಹೊಂದಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ವಿಶೇಷ ಎಕಾಡೆಮಿಕ್ ಕೌನ್ಸಿಲ್ನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ದೇಶಾದ್ಯಂತ ಮತ್ತು ರಾಜ್ಯದಾದ್ಯಂತ ಸಿವಿಲ್, ಕ್ರಿಮಿನಲ್, ಕುಟುಂಬ ಮತ್ತು ವ್ಯವಹಾರ ವಿಷಯಗಳಲ್ಲಿ ನ್ಯಾಯಾಲಯಗಳು, ಅರೆ-ನ್ಯಾಯಾಂಗ ಸಂಸ್ಥೆಗಳು ಮತ್ತು ಪರ್ಯಾಯ ವಿವಾದ ಪರಿಹಾರ ವಿಧಾನಗಳಲ್ಲಿ ತಮ್ಮ ಗ್ರಾಹಕರನ್ನು ಪ್ರತಿನಿಧಿಸುತ್ತಾರೆ.
ಇವರು ಅಕಾಡೆಮಿಕ್ ಪ್ರಭಾವದ ಹಾದಿಯನ್ನು ನಿರಂತರವಾಗಿ ಪ್ರಯತ್ನಿಸುತ್ತಾರೆ ಮತ್ತು ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ವಿವಿಧ ಕಾನೂನು ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಮತ್ತು ಜಿಲ್ಲಾ ಜೈಲುಗಳಲ್ಲಿ ಅಪರಾಧಿಗಳಿಗೆ ವಿವಿಧ ಕಾನೂನು ವಿಭಾಗಗಳ ಕುರಿತು ಮಾತುಕತೆ ನಡೆಸುತ್ತಾರೆ.

 

ಶ್ರೀ. ಜಗನ್ನಾಥ ಕುಲಕರ್ಣಿ

ಶ್ರೀ. ಜಗನ್ನಾಥ ಕುಲಕರ್ಣಿ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರ ಮಂಡಳಿ ಸದಸ್ಯರಾಗಿದ್ದಾರೆ. ಇವರು ರಾಯಚೂರು ಜಿಲ್ಲೆಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬ್ರಾಹ್ಮಣ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವರು.

 

ವೇದಬ್ರಹ್ಮ ಶ್ರೀ. ಡಾ॥ವಿ.  ಭಾನುಪ್ರಕಾಶ ಶರ್ಮ

ವೇದಬ್ರಹ್ಮ ಶ್ರೀ. ಡಾ॥ವಿ.  ಭಾನುಪ್ರಕಾಶ ಶರ್ಮ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರ ಮಂಡಳಿ ಸದಸ್ಯರಾಗಿದ್ದಾರೆ. ಇವರು ಕೃಷ್ಣ ಯಜುರ್ವೇದ, ಶೈವಾಗಮ ಪ್ರವರ ಸಾಹಿತ್ಯ, ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಅಧ್ಯಯನ ಮಾಡಿ, ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದು ಹಲವಾರು ಪುರಸ್ಕಾರಗಳನ್ನು ಗಳಿಸಿರುವರು. 

 

ಶ್ರೀ. ಎ. ಜೆ. ರಂಗವಿಠ್ಠಲ

ಶ್ರೀ. ಎ. ಜೆ. ರಂಗವಿಠ್ಠಲ ರವರು ಗೌರವಾನ್ವಿತ ಕರ್ನಾಟಕ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರ ಮಂಡಳಿ ಸದಸ್ಯರಾಗಿದ್ದಾರೆ. ಇವರು ಕೃಷಿಕರು , ಶಿಕ್ಷಣ ತಜ್ಞರು ಸಮಾಜ ಸೇವಕರಾಗಿದ್ದಾರೆ. ಇವರು ರಿಯಲ್ ಎಸ್ಟೇಟ್ ಮತ್ತು ಎಲೆಕ್ಟ್ರಿಕಲ್ (ಖಾಸಗಿ ಮತ್ತು ಸರ್ಕಾರಿ ಒಪ್ಪಂದಗಳಲ್ಲಿ) ಗುತ್ತಿಗೆದಾರರಾಗಿದ್ದಾರೆ.

 



 

ಇತ್ತೀಚಿನ ನವೀಕರಣ​ : 25-08-2021 10:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080