ಅಭಿಪ್ರಾಯ / ಸಲಹೆಗಳು

ಶ್ರೀ ಹೆಚ್ ಎಸ್ ಸಚ್ಚಿದಾನಂದ ಮೂರ್ತಿ ರವರ ಪರಿಚಯ

* ಶ್ರೀ ಹೆಚ್ ಎಸ್ ಸಚ್ಚಿದಾನಂದಮೂರ್ತಿ ರವರ ಪರಿಚಯ *

  • ಶ್ರೀ ಸಚ್ಚಿದಾನಂದಮೂರ್ತಿ ರವರು ಶ್ರೀಮತಿ ಸುಂದರಮ್ಮ ಮತ್ತು ಶ್ಯಾಮಣ್ಣ ರವರ ತೃತೀಯ ಪುತ್ರ, ಇವರು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡು ಗ್ರಾಮದಲ್ಲಿ ಜುಲೈ 20 ರಂದು ಜನಿಸಿದರು.
  • ಇವರು ಹಳೇಬೀಡು ಮತ್ತು ಹಾಸನದಲ್ಲಿ ವ್ಯಾಸಾಂಗವನ್ನು ಮುಗಿಸಿ 1978 ರಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ನೆಲೆಸಿದರು. ಇವರು ಬಾಲ್ಯದಿಂದಲೂ ಸ್ವಯಂ ಸೇವಕರು.
  • ಇವರು 1978 ರಿಂದ 1984 ರವರೆಗೆ ಆಂದ್ರಸ್ಟೀಲ್, ಕ್ಯಾಪ್ ಸ್ಟೀಲ್, ಭರೂಕಾ ಸ್ಟೀಲ್, ಬೃಂದಾವನ ಸ್ಟೀಲ್ ಕಂಪನಿಗಳಲ್ಲಿ ಕಾರ್ಮಿಕ ಮುಖಂಡರಾಗಿ ಸೇವೆ ಸಲ್ಲಿಸಿರುತ್ತಾರೆ.
  • 1983 ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಪ್ರವೇಶಿಸಿ ಅನನ್ಯ ಜವಾಬ್ದಾರಿಗಳನ್ನು ಹೊತ್ತು ವರ್ತೂರು ಕ್ಷೇತ್ರದ ಅಧ್ಯಕ್ಷರಾಗಿ , ಬೆಂಗಳೂರು ಉತ್ತರ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ, ಬೆಂಗಳೂರು ಕ್ಷೇತ್ರ ಜಿಲ್ಲಾ ಅಧ್ಯಕ್ಷರಾಗಿ ಹಾಗೂ ಬಿಜೆಪಿಯ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾಗಿ , ಬಿಜೆಪಿ ರಾಜ್ಯ ವಕ್ತಾರರಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಭಾಗದ ಪ್ರಭಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ.
  • ಅಲ್ಲದೆ, 2012ರಲ್ಲಿ ಕಿಯೋನಿಕ್ಸ್ (Karnataka State Electronics Development Corporation Limited - KEONICS) ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿರುತ್ತಾರೆ.
  • 1991 ರಿಂದ 2014 ರವರೆಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಉಸ್ತುವಾರಿಗಳಾಗಿ ಹಾಗೂ ಕರ್ನಾಟಕ ರಾಜ್ಯದಲ್ಲಿ ನಡೆದ ಎಲ್ಲಾ ಉಪಚುನಾವಣೆಗಳ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ.
  • ಕರ್ನಾಟಕ ರಾಜ್ಯವಷ್ಟೇ ಅಲ್ಲದೆ, ಬೇರೆ ರಾಜ್ಯಗಳಾದ ಆಂಧ್ರ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲಿಯೂ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುತ್ತಾರೆ.
  • 2018 ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡು ಮಾನ್ಯ ಪ್ರಧಾನ ಮಂತ್ರಿ  ಶ್ರೀ ನರೇಂದ್ರ ಮೋದಿ ಹಾಗೂ ಶ್ರೀ ಅಮಿತ್ ಷಾ ರವರ ಬೃಹತ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುತ್ತಾರೆ.

:ಇವರ ಸಾಮಾಜಿಕ ಹೋರಾಟಗಳು:

  • ರಾಜಕೀಯ ಪ್ರವೇಶಾರಂಭದಿಂದಲೂ ಸಾಮಾಜಿಕ ಕಳಕಳಿಗಾಗಿ ಸ್ಪಂದಿಸಿ ಸಾಕಷ್ಟು ಹೋರಾಟಗಳನ್ನು ನಡೆಸುತ್ತಾ ಬಂದಿರುತ್ತಾರೆ.
  • ಸರ್ಕಾರಿ ಜಾಗಗಳ ಉಳಿವಿಗಾಗಿಬೃಹತ್ ಹೋರಾಟ, ಕೆರೆ ಸಂರಕ್ಷಣೆಗಾಗಿ ಹೋರಾಟ, ಕೃಷ್ಣರಾಜಪುರದಲ್ಲಿನ ರುದ್ರಭೂಮಿಗಾಗಿ ಹೋರಾಟ, ಅಲ್ಲಿನ ಸಂತೆಗಾಗಿ ಮತ್ತು ಕಟ್ಟೆ ವಿನಾಯಕ ದೇವಸ್ಥಾನದ ಉಳಿವಿಗಾಗಿ ಹೋರಾಟನಡೆಸಿ ಹಲವಾರು ಜನ ಸಾಮಾನ್ಯರ ನೆಮ್ಮದಿಯ ಜೀವನಕ್ಕೆ ಅನುವು ಮಾಡಿಕೊಟ್ಟಿರುತ್ತಾರೆ.
  • 2001 ರಲ್ಲಿ ಕೃಷ್ಣರಾಜಪುರ ನಗರಸಭೆಯಲ್ಲಿ ನಡೆದ ರೂ.131 ಕೋಟಿ ಬೃಹತ್ ಭ್ರಷ್ಟಾಚಾರದ ಹಗರಣವನ್ನು ಬಯಲು ಮಾಡಿರುತ್ತಾರೆ.
  • ಅದೇ ರೀತಿ, ರಾಮಜನ್ಮ ಭೂಮಿಗಾಗಿ ಹೋರಾಟ, ಅಯೋಧ್ಯೆ ರಾಮರಥಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುತ್ತಾರೆ.
  • ನಿತ್ಯ ಪೂಜೆ, ರಾಮಜ್ಯೋತಿ, ಅಯೋಧ್ಯೆಯ ಕರಸೇವಕರಾಗಿ ಹಾಗೂ ಏಕತಾ ಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುತ್ತಾರೆ.
  • ಅಷ್ಟೇ ಅಲ್ಲದೆ, ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ರವರ ನೇತೃತ್ವದಲ್ಲಿ ಜರುಗಿದ ಪರಿವರ್ತನೆ ಯಾತ್ರೆಹಾಗೂ ಸಂಕಲ್ಪ ಯಾತ್ರೆಯ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.

         ಇತ್ತೀಚೆಗಷ್ಟೆ, ಕಳೆದ 38 ವರ್ಷಗಳ ಶ್ರೀಯುತರ ಹೋರಾಟ ಮತ್ತು ಸೇವೆಯನ್ನು ಗುರುತಿಸಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ,ಎಸ್ ಯಡಿಯೂರಪ್ಪರವರು ಇವರನ್ನು ಪ್ರಸಕ್ತ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದು, ಸದರಿ ಮಂಡಳಿಯಲ್ಲಿ ಬ್ರಾಹ್ಮಣ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ನಾನಾರೀತಿಯ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳಲು ಹಾಗೂ ನಿರ್ವಹಿಸಲು ಮುಂದಾಗಿದ್ದಾರೆ.

 

ಇವರ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರದ ನಾಗರಿಕ ಹುದ್ದೆಗಳು ಹಾಗೂ ಶೈಕ್ಷಣಿಕ  ಮೀಸಲಾತಿ ಪಡೆಯಲು ಸಾಮಾನ್ಯ ವರ್ಗದವರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಉದ್ದೇಶಕ್ಕೆ ವಿತರಿಸಲಾಗುವ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನೇ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿವಿಧ ಯೋಜನೆಗಳಿಗೆ ಅರ್ಹತಾ ಮಾನದಂಡವನ್ನಾಗಿ ಪರಿಗಣಿಸಲು ರಾಜ್ಯ ಸರ್ಕಾರವು ದಿನಾಂಕ 14.7.2020 ರ ಪತ್ರ ಸಂಖ್ಯೆ : ಕಂಇ36 ಮುಅಬಿ 2020 ರಲ್ಲಿ ಅನುಮತಿ ನೀಡಿರುತ್ತದೆ.

 

 

ಇತ್ತೀಚಿನ ನವೀಕರಣ​ : 16-07-2020 06:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080